ಅಕ್ಷಯ ತೃತೀಯಾ ಸಮಾರಾಧನೆ (ಹರದಿನ)- ಶ್ರೀ ವಿ.ಡಿ.ಕಸಬೇಕರ್

ಶ್ರೀ ಗುರುಭ್ಯೋ ನಮಃ
ಅಕ್ಷಯ ತೃತೀಯಾ ಸಮಾರಾಧನೆ (ಹರದಿನ)


ಶ್ರೀ ಅಕ್ಷಯ ತೃತೀಯಾ ಸಮಾರಾಧನೆ (ಹರದಿನ) ಇದೊಂದು ಬಡಗೇರಿ ರಾಮುಸುಬ್ಬು ಮನೆತನದವರು ನಡೆಸಿಕೊಂಡು ಬರುವಂತಹ ವಿಶೇಷ ಕೌಟುಂಬಿಕ ಸಮಾರಂಭ. ಈ ಸಮಾರಂಭವು ವೈಶಾಖ ಮಾಸದ ಶುಕ್ಲ ಪಕ್ಷದ ತೃತಿಯಾದಿವಸ ಅಚರಿಸಲ್ಪಡುತ್ತದೆ. ಇದನ್ನು ರಾಮುಸುಬ್ಬು ಮನೆತನದ ಸದಸ್ಯರು ಪ್ರತಿ ಮನೆಯವರು ಒಂದೊಂದು ವರ್ಷದಂತೆ ಆಚರಿಸಿಕೊಂಡು ಬಂದಿರುತ್ತಾರೆ. ಈ ಸಮಾರಂಭಕ್ಕೆ ಕುಟುಂಬದ ಸದಸ್ಯರು ಎಲ್ಲೇ ಪರ ಊರರಲ್ಲಿದ್ದರೂ ಆ ದಿನದ ಪೂಜೆಗೆ ಬಂದು ತಮ್ಮ ಸೇವೆಯನ್ನು ಒಪ್ಪಿಸುವುದು ಒಂದು ವಿಶೇಷ ಈ ಕಾರ್ಯಕ್ರಮ ಅಂಕೋಲಾ ತಾಲ್ಲೂಕಿನ ಬಡಗೇರಿ ಗ್ರಾಮದಲ್ಲಿ ಕಳೆದ 150 ವರ್ಷದಿಂದ ಅವಿರತವಾಗಿ ನಡೆದುಕೊಂಡು ಬಂದಿರುತ್ತದೆ. ಮತ್ತು ಅಂದಿನ ಕಾರ್ಯಕ್ರಮವನ್ನು ಯಾರು ಯಾರು ಮಾಡಬೇಕು ಮತ್ತು ಅದರ ಪದ್ಧತಿ ಬಗ್ಗೆ ದಸ್ತೇವಾಜು (ಖeಛಿoಡಿಜ) ಕೂಡ ಲಭ್ಯವಿದೆ.
ಅಕ್ಷಯ ತೃತೀಯಕ್ಕೆ ನಾಲ್ಕೈದು ದಿನ ಮುಂಚಿತವಾಗಿ ಪರ ಊರಲ್ಲಿರುವ ಬಹುತೇಕ ಸದಸ್ಯರು ಊರಿಗೆ ಬರುತ್ತಾರೆ. ಮೊದಲಿನ ಕಾಲದಲ್ಲಿ ಈ ಕಾರ್ಯಕ್ರಮ 3 ದಿವಸ ನಡೆಯುತ್ತಿದ್ದು ಮೊದಲನೇಯ ದಿನ ಶ್ರೀ ದೇವಕಾರ್ಯ ಎರಡನೇ ದಿನ ಅಕ್ಷಯ ತೃತೀಯ ಸಮಾರಾಧನೆ, ಮೂರನೇ ದಿವಸ ಕಿರುಹರದಿನ ಆದರೆ ಇಂದಿನ ಪರಿಸ್ಥಿತಿ ಅನುಗುಣವಾಗಿ ಒಂದೇ ದಿವಸ ಎಲ್ಲಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುತ್ತಾರೆ. ಕಾರ್ಯಕ್ರಮವು ಪುರೋಹಿತರ ಮುಖೇನ ನಡೆಯುತ್ತಿದ್ದು ಬೆಳಿಗ್ಗೆ 9, 10 ಘಂಟೆಗೆ ದೇವಕಾರ್ಯ ಪ್ರಾರಂಭವಾಗಿ ಶುದ್ಧ ಹವನ ಜಲಸುದ್ಧಿ, ಅಗ್ನಿಪೂಜೆ, ಮುಂತಾದ ಕೆಲಸಗಳಿರುತ್ತದೆ. ನಂತರದಲ್ಲಿ ಅಂಕೋಲಾ ಪಟ್ಟನದಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಮ್ಮ ಕುಟುಂಬದ ವತಿಯಿಂದ ದೇವರಲ್ಲಿ ಅಭಿಷೇಕ ಮತ್ತು ಪೂಜೆ ನಡೆಯುತ್ತದೆ. ಅಲ್ಲಿಂದ ತಂದ ತೀರ್ಥ ಪ್ರಸಾದವನ್ನು ಅಕ್ಷಯ ತೃತೀಯ ಪ್ರಸಾದದಲ್ಲಿ ಸೇರಿಸಲಾಗುತ್ತದೆ.
ಮಧ್ಯಾಹ್ನದ ನಂತರ ಪೂಜಾ ಕಾರ್ಯಕ್ರಮ ನಡೆಸಲಾಗುತ್ತದೆ. ಆ ಸಮಯದಲ್ಲಿ ತುಳಸಿ (ಬೃಂದಾವನ) ಕಟ್ಟೆಗೆ ಸೀರೆ ಉಡಿಸಿ ಶ್ರೀ ವೆಂಕಟರಮಣಗೆ ಪದ್ಮಾವತಿ ಮತ್ತು ಗೋವಿಂದರಾಜ ಸ್ವಾಮಿ ಮೂರ್ತಿಯನ್ನು ಹೊರತೆಗೆದು ಅದನ್ನು ನೀರಿನಲ್ಲಿ ಸ್ವಚ್ಛಮಾಡಿ ಪಂಚಾಮೃತ ಅಭೀಷೇಕ ಮತ್ತು ಹೂ ಅಲಂಕಾರ ಮಾಡಲಾಗುತ್ತದೆ. ನಂತರದಲ್ಲಿ ಭಕ್ತರಿಂದ ಬಂದ ನೂರಾರು ತೆಂಗಿನ ಕಾಯಿಗಳನ್ನು ಒಡೆದು ನೈವೇದ್ಯ ಮಾಡಲಾಗುತ್ತದೆ. ಪೂಜಾ ಕಾರ್ಯಕ್ರಮವು ಪುರೋಹಿತರ ಮುಖೇನ ಬಹಳ ಅದ್ದೂರಿಯಾಗಿ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ನಮ್ಮ ಕುಟುಂಬದ ಸಂಬಂಧಿಕರಲ್ಲದೇ ಹೊರಗಿನ ನಮ್ಮ ಸಮಾಜದವರು ಕೂಡ ಬಹಳ ಜನರು ಬರುತ್ತಾರೆ. ಪೂಜೆಗೆ ಸುಮಾರು 200 ಜನ ಮೇಲ್ಪಟ್ಟು ನೆರೆದಿದ್ದು ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಊಟದ ನಂತರ ಎಲ್ಲ ನೆರೆದ ಮಹಾನೀಯರನ್ನು ದೇವರ ಮುಂದೆ ಕೂಳ್ಳರಸಿ ಪ್ರತಿಯೊಬ್ಬರಿಗೂ ಮಾಲಾರ್ಪಣೆ ಮಾಡಿ ಶ್ರೀದೇವರ ಪ್ರಸಾದ ಮತ್ತು ತೆಂಗಿನಕಾಯಿ ಕೊಡಲಾಗುತ್ತದೆ.

ಈ ಕಾರ್ಯಕ್ರಮವು ಪ್ರತಿ ಹತ್ತು ವರ್ಷಕ್ಕೆ ಒಂದೊಂದು ಮನೆಯವರಿಗೆ ಬರುತ್ತದೆ. ಇದರಲ್ಲಿ ಮಾರನೆಯ ದಿವಸ ನಡೆಯುವ ಶ್ರೀಜಟಕ ಮಹಾರಾಜನ ಸಮಾರಾಧನೆ ಇರುತ್ತದೆ. ಇವೆಲ್ಲ ವಿನಿಯೊಗಕ್ಕಾಗಿ ಪೂರ್ವಜರು ಕುಟುಂಬದ ಕೆಲವು ಜಮೀನನ್ನು ಗೇಣಿಗೆ ಕೊಟ್ಟಿಟ್ಟು ಆದರಿಂದ ಬರುವ ಉತ್ಪನ್ನದಿಂದ ಈ ಸಮಾರಾಧನೆ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಆದರೆ ಇಂದಿನ ದಿನದ ಪರಿಸ್ಥಿತಿ ಬದಲಾಗಿರುವುದರಿಂದ ಜಮೀನಿನ ಉತ್ಪನ್ನವೆನೂ ಇಲ್ಲದಿರುವುದರಿಂದ ನಮ್ಮ ಪೂರ್ವಜರು ಸುಮಾರು 30 40 ವರ್ಷಗಳ ಹಿಂದೆ ಈ ಖರ್ಚಿನ ಬಾಬನ್ನು ಗಣನೆಗೆ ತೆಗೆದುಕೊಂಡು ಕುಟುಂಬದ ಪ್ರತಿ ದುಡಿಯುವ ವ್ಯಕ್ತಿ ರೂ.500/- ಗಳನ್ನು ಅಕ್ಷಯ ತೃತೀಯ ಖರ್ಚಿನ ಬಗ್ಗೆ ಬ್ಯಾಂಕಿನಲ್ಲಿ ಇಡುವಂತೆ ನಿರ್ಧರಿಸಿ ಆ ಹಣದಿಂದಲೇ ಸಮಾರಾಧನೆ ನಡೆಸುವಂತೆ ನಿರ್ಣಯಿಸಿದ್ದು  ಆ ಕೂಡಿದ ಹಣವೇ ಇಂದು ಒಂದು ಒಂದೂವರೇ ಲಕ್ಷ ಹಣ ಬ್ಯಾಂಕಿನಲ್ಲಿದ್ದು ಪ್ರತಿ ವರ್ಷ ಸಮಾರಾಧನೆ ಮಾಡುವವರಿಗೆ ಹಣದ  ಬಡ್ಡಿಯಲ್ಲಿ ಸ್ವಲ್ಪ ಮಟ್ಟಿಗೆ ಕೊಡುವ ಪದ್ಧತಿ ಮಾಡಿರುತ್ತೇವೆ. ಉಳಿದ ಖರ್ಚನ್ನು ಅವರೇ ನಿಭಾಯಿಸಬೇಕಾಗುತ್ತದೆ. ಇದಲ್ಲದೇ ಸಮಾರಂಭ ಮಾಡಿದವರಿಗೆ ಈ ವರ್ಷ ಇನ್ನೆರಡು ಸೇವಾಕಾರ್ಯಗಳು ಇರುತ್ತದೆ. ಅದೆÉಂದರೆ ಒಂದು ಶ್ರೀ ಆಮದÀಳ್ಳಿ ಬಂಡಿ (ಹಬ್ಬದಲ್ಲಿ ಹೂವಾಡಲಿಕ್ಕೆ ಕುಟುಂಬದ ಒಬ್ಬ ಬ್ರಹ್ಮಚಾರಿಯನ್ನು ಕರೆದೊಯ್ದು ಹೂವಾಡಿಸುವುದು ಇನ್ನೊಂದು ಶ್ರೀ ವಿಠ್ಠಲ ಸದಾಶಿವ ನವರಾತ್ರಿಯಲ್ಲಿ ದೇವಸ್ಥಾನದಲ್ಲಿ ಹೂವಿನ ಪೂಜೆ ಕಟ್ಟುವದು ಈ ಎಲ್ಲಾ ಕಾರ್ಯವನ್ನು ಕುಟುಂಬದವರು ಇಲ್ಲಿಯವರೆಗೆ ತೃಪ್ತಿಯಿಂದ ನಡೆಸಿಕೊಂಡು ಬಂದಿರುತ್ತಾರೆ. ಕುಟುಂಬದ ಹೆಚ್ಚಿನ ಸದಸ್ಯರು ಈ ಸೇವೆಗೆ ಪರ ಊರಿನಲ್ಲಿದ್ದರೂ ಕೂಡಾ ಅಕ್ಷಯ ತೃತೀಯ ವಾರ ಕೆಲಸ ಇಲ್ಲಿಯವರೆಗೆ ವಿಜ್ರಂಭಣೆಯಿಂದ ನಡೆಯುವುದು ಆ ಪರಮಾತ್ಮನ ಕೃಪೆಯಿಂದಲೇ ಅನಿಸುತ್ತದೆ. ಇದಕ್ಕೆ ಕುಟುಂಬ ವರ್ಗದವರ ಶ್ರದ್ಧಾ ಭಕ್ತಿಯೇ ಕಾರಣವಾಗಿದೆ. ಇದೇ ರೀತಿ ಇನ್ನು ಮುಂದೆ ಕೂಡ ಕುಟುಂಬವರ್ಗದವರೆಲ್ಲ ಕೂಡಿ ದೇವರ ಕೆಲಸವನ್ನು ನಿಷ್ಟೆಇಂದ ಮಾಡಿ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕೆಂದು ಹಾರೈಸುವ
ಸಹಿ/-
ಶ್ರೀ ವಿ.ಡಿ.ಕಸಬೇಕರ್
ಅಧ್ಯಕ್ಷರು,
ರಾಮಸುಬ್ಬು ಮನೆತನದ ಹಿತವರ್ದಕ ಸಂಘ
ಬಡಗೇರಿ, ಅಂಕೋಲಾ

Related Articles

2 COMMENTS

  1. ಬಡಗೇರಿ ರಾಮುಸುಬ್ಬು ಮನೆತನದ ಹರದಿನ ಆಚರಣೆಯ ಕುರಿತು ಬಾಲ್ಯದಿಂದಲೂ ಕೇಳಿಬಲ್ಲೆ, ಸಂಸ್ಕೃತಿ ಸಂಪ್ರದಾಯಗಳು ನಶಿಸಿ ಹೋಗುತ್ತಿರುವ ಆಧುನಿಕತೆಯ ಈ ಪ್ರಸ್ತುತ ಸಂದರ್ಭದಲ್ಲಿ, ಧಾರ್ಮಿಕ ಭಾವನೆಯಿಂದ ನಡೆಯುತ್ತಿರುವ ಇಂಥ ’ಒಗ್ಗಟ್ಟು” ನಮ್ಮ ಸಮಾಜಕ್ಕೆ ಒಂದು ಮಾದರಿಯಾದದ್ದು.
    -ಸುನಂದಾ ಕಡಮೆ

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles