ಮೈತ್ರೇಯಿ ವನಿತಾ ಸಮಾಜ (ಸ್ಥಾ: ೧೯೭೯) – ಶ್ರೀಮತಿ ಮುಕ್ತಾ ಮೋಹನ ಶೆಟಿ

ಶತಮಾನಗಳು| ಕಳೆದರೇನು|
ಋತುಮಾನಗಳು| ಉರುಳಿದರೇನು|
ದಿಟ್ಟ ಹೆಜ್ಜೆಯ| ಇಟ್ಟ ಮಾನಿನಿ |
ಯಾರು ಎಂದು|
||ಬಲ್ಲಿರೇನು-ಬಲ್ಲಿರೇನು||
ಭೂಮಿ-ತಾಯಿ| ಭೂದೇವಿಯಾಗಿ|
ಹಸಿರನುಟ್ಟಾ| ವನದೇವಿಯಾಗಿ|
ಝಳು-ಝುಳು| ಹರಿದು| ಪಾಪವ ತೊಳೆವ
ಪಾವನ-ಗಂಗಾ| ಮಾಽಽಯೀ| ಮಾನಿನಿ
||ಬಲ್ಲಿರೇನು-ಬಲ್ಲಿರೇನು||
ನವಮಾಸ ಧರಿಸಿ| ಅನುರಾಗ ಉಣಿಸಿ|
ಜೋಗುಳ ಹಾಡಿ| ಜಗವಾ ತೂಗೋ…|
ಸಹನಾ ಮೂರುತಿ| ಶಾಂತಿ-ದಾಯಿನಿ
ಜಗವಾ ಬೆಳಗೋ| ಜನನೀ-ಮಾನಿನಿ
||ಬಲ್ಲಿರೇನು-ಬಲ್ಲಿರೇನು||
ಅಕ್ಕ-ತಂಗಿಯ|ಅಕ್ಕರೆ ಪ್ರೀತಿ
ಅತ್ತಿಗೆ-ನಾದಿನಿ| ಒಲವಿನ ನೀತಿ
ಮುದವನು ನೀಡುವಾ| ಮಡದಿಯ ರೀತಿ
ಅನಂತ-ಪ್ರೇಮದ|ಆನಂದ ಜ್ಯೋತಿಯು
||ಬಲ್ಲಿರೇನು-ಬಲ್ಲಿರೇನು||
ವಿದ್ಯೆಯು-ಕಲಿಸೋ| ವಾಗ್ದೇವಿ-ಮಾನಿನಿ
ಸಿರಿಯನು ಕೊಡುವ| ಸಿರಿದೇವಿ-ಮಾನಿನಿ
ಶಕ್ತಿ ರೂಪಿಣಿ-ಮುಕ್ತಿ ದಾನಿನಿ
ಸಕಲ-ಚರಾ-ಚರ|ಆತ್ಮ ರೂಪಿಣಿ
||ಬಲ್ಲಿರೇನು-ಬಲ್ಲಿರೇನು||
– ಶ್ರೀಮತಿ ಮುಕ್ತಾ ಮೋಹನ ಶೆಟಿ
ಬೆಂಗಳೂರು -೫೬೦ ೦೫೬.

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles