ಅಂತೂ ಕಟ್ಟಿದೆವು
ಬೆಂದಕಾಳೂರು ನಗರದಿ,
ನಮ್ಮದೇ ಸ್ವಂತ ಕಟ್ಟಡ
ಹೆಸರು “ಶಂಕರ ಸನ್ನಿಧಿ.”
ಸನ್ನಿಧಿಗೆ ಕಳಶವಿಟ್ಟಂತೆ
“ಸುಕೇನಾಶ್ರೀ” ಸಭಾಂಗಣ,
ಶ್ರೀಗಂಧ ಕಾವಲಲ್ಲೊಂದು
ಸಮಾರಂಭ ತಾಣ.
ಸನ್ನಿಧಿಯ ನಡುಮನೆಯಲಿ
ಶ್ರೀ ಶಂಕರರ ಭಾವಚಿತ್ರ,
ಆಧ್ಯಾತ್ಮ ಕ್ಷೇತ್ರದ ಸಾಧಕ
ಶ್ರೀ ಶಾರದೆ ವರಪುತ್ರ.
ಹಲವು ವರ್ಷಗಳ
ಸತತ ಪ್ರಯತ್ನ,
ಶ್ರೀ ಶಾರದೆಯ ಕೃಪೆಯಿಂದ
ಸರ್ವವೂ ನಿರ್ವಿಘ್ನ
ಮೊದಲ ಅಂತಸ್ತು ಪೂರ್ತಿ,
ಈಗ ಮತ್ತೊಂದರ ಸರದಿ,
ಸಂಕಲ್ಪ ಮೂಡಿದೆ,
ಅದಕಾಗಿ ಭರದಿ.
ಸಮಾಜ ಬಾಂಧವರಲ್ಲಿ
ಇಗೊಳ್ಳಿ ಇಲ್ಲೊಂದು ಬೇಡಿಕೆ,
ತನು,ಮನ, ಧನ ನೀಡಿ
ಸಹಕರಿಸಿರೆಂದು ಕೋರಿಕೆ.
ಉತ್ತರ ಕನ್ನಡ ವೈಶ್ಯ ಸಂಘ
ಬಳ್ಳಿಯಂತೆ ಹಬ್ಬಲಿ,
ಪ್ರಗತಿಪಥದಿ ಗುರಿಯ ಕಡೆಗೆ
ದಾಪುಗಾಲು ಹಾಕಲಿ.
ಮೈತ್ರೇಯಿ ಸ್ಮರಣ ಸಂಚಿಕೆಗೆ
ಈ ಪುಟ್ಟ ಕವನ,
ಸಂಘ ಶಕ್ತಿ ಜಗದ ರೀತಿ
ಆ ಶಕ್ತಿಗೆ ನಮನ
-ನಾಗರಾಜ ಅನಂತ ಶೆಟ್ಟಿ
ಗೆಲಿಲಿಯೋ ವಿಜ್ಞಾನ ಕೂಟ
Terms & Condition || Privacy Policy || Sitemap || Contact Us ![]()
© 2023-24 MyKVS. All rights reserved. || Powered by Onestop Website Solution
Terms & Condition
Privacy Policy
Sitemap
Contact Us ![]()
© 2023-24 MyKVS. All rights reserved. || Powered by Onestop Website Solution

