ದೀಪದ ಮಹತ್ವ

ಹಿಂದೂ ಸಂಪ್ರದಾಯದಲ್ಲಿ ದೀಪವನ್ನು ಮಹಾಲಕ್ಷ್ಮಿಯ ಸಂಕೇತ ಎಂದು ಹೇಳಲಾಗಿದೆ. ಶುಭಕಾರ್ಯಗಳನ್ನು ದೀಪ ಹಚ್ಚುವುದರಿಂದ ಪ್ರಾರಂಭಿಸಬೇಕು.ಸಂಜೆ ಹೊತ್ತು ಮನೆಯಲ್ಲಿ ದೀಪ ಹಚ್ಚುವಾಗ ಹಿಂದಿನ ಬಾಗಿಲನ್ನು ಹಾಕಿ ಮುಂದಿನ ಬಾಗಿಲನ್ನು ತೆರೆದಿಡಬೇಕು. ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಯಾರ ಮನೆಯಲ್ಲಿ ದೀಪ ಉರಿಯುತ್ತಿರುತ್ತದೆಯೋ ಅಂತಹ ಮನೆಗೆ ದಾರಿದ್ರ್ಯ ಪ್ರವೇಶಿಸುವುದಿಲ್ಲ.ದೀಪವು ಪೂರ್ವಾಭಿಮುಖವಾಗಿ ಇದ್ದರೆ ಆಯಸ್ಸು ವೃದ್ಧಿ,ದೀಪವು ಉತ್ತರಾಭಿಮುಖವಾಗಿ ಇದ್ದರೆ ಹಣ ವೃದ್ಧಿ, ಪಶ್ಚಿಮಾಭಿಮುಖವಾಗಿ ಇದ್ದರೆ ದುಃಖ ,ದಕ್ಷಿಣಾಭಿಮುಖವಾಗಿ ಇದ್ದರೆ ಹಾನಿ.ದೀಪವು ನಾಲ್ಕೂ ಕಡೆ ಇದ್ದರೆ ಶುಭ. ಬೆಳಕು ಎಂದರೆ ಜ್ಞಾನ.ಕತ್ತಲೆ ಎಂದರೆ ಅಜ್ಞಾನ.ಒಳಗಿರುವ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಲು ದೀಪವನ್ನು ಹಚ್ಚಿ ಪೂಜಿಸಲಾಗುತ್ತದೆ. ಉಪನಿಷತ್ತಿನಲ್ಲಿ ಈ ಪ್ರಾರ್ಥನೆಯನ್ನು ಕಾಣುತ್ತೇವೆ-‘ ತಮಸೋಮ ಜ್ಯೋತಿರ್ಗಮಯ’ (ದೇವರೇ ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆ ನಡೆಸು). ದೀಪದ ಮೂಲೆಯಲ್ಲಿ ಬ್ರಹ್ಮ ,ಮಧ್ಯದಲ್ಲಿ ವಿಷ್ಣು,ತುದಿಯಲ್ಲಿ ಶಂಕರನು ಇರುತ್ತಾರೆಂದು ಹೇಳಲಾಗಿದೆ. ಕಾರ್ತೀಕ ಮಾಸದಲ್ಲಿ ಪ್ರತಿ ಮನೆಯ ಅಂಗಳದಲ್ಲೂ ದೀಪಗಳನ್ನು ಹಚ್ಚಿಡಲಾಗುತ್ತದೆ. ಈ ಮಾಸದಲ್ಲಿ ಬರುವ ದೀಪಾವಳಿ ಹಬ್ಬದಲ್ಲಿ ಎಲ್ಲೆಲ್ಲೂ ದೀಪಗಳು ರಾರಾಜಿಸುತ್ತಿರುತ್ತವೆ. ಈ ಕಾರಣದಿಂದ ಕಾರ್ತೀಕ ಮಾಸವನ್ನು ದೀಪಗಳ ಮಾಸ ಎಂದು ಕರೆಯುತ್ತಾರೆ.
ಯಮನು ದಕ್ಷಿಣ ದಿಕ್ಕಿಗೆ ಅಧಿಪತಿಯಾಗಿರುದರಿಂದ ಆ ದಿಕ್ಕಿಗೆ ಮುಖಮಾಡಿ ಎಂದಿಗೂ ದೀಪ ಇಡಬಾರದು.ಅಶ್ವಯುಜ ತ್ರಯೋದಶಿಯನ್ನು ಯಮ ತ್ರಯೋದಶಿಯಂದು (ದೀಪಾವಳಿಯ ಮೊದಲ ದಿನ) ಕರೆಯುತ್ತಾರೆ. ಆ ದಿನ ಮಾತ್ರ ದಕ್ಷಿಣ ದಿಕ್ಕಿಗೆ ಮುಖ ಮಾಡಿ ದೀಪ ಇಡಬೇಕು.
-ಶ್ರೀಪಾದ
ಆಧಾರ:ಭಾರತೀಯ ಪರಂಪರೆ.
31/03/2020.

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles